ಕೆಲವರಿಗೆ ತುಂಬಾ ಕೆಮ್ಮ ಹಾಗೂ
ಶೀತವಿದ್ದಾಗ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಅಥವಾ ಹಾಲಿಗೆ ಅರಿಶಿಣ ಹಾಕಿ ಕುಡಿಯುತ್ತಾರೆ.
ಇದರಿಂದ ಆರೋಗ್ಯ ಸಮಸ್ಯೆ ತಡೆಗಟ್ಟಬಹುದು. ಆದರೆ ನೀರಿಗೆ ದಿನಾ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದರಿಂದ
ದೊರೆಯುವ ಪ್ರಯೋಜನವೇನು?
ನೀರಿಗೆ ಸ್ವಲ್ಪ ಅರಿಶಿಣ ಹಾಕಿ
ಕುಡಿಯುವುದರಿಂದ ಈ ಪ್ರಯೋಜನಗಳಿವೆ:
ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು:
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದರಿಂದ ಉರಿಯೂತದ ಸಮಸ್ಯೆ
ಕಡಿಮೆಯಾಗುವುದು. ಪುಡಿ ಇಲ್ಲದಿದ್ದರೆ ಅರಿಶಿಣ ಬೇಯಿಸಿ ಒಣಗಿಸಿಟ್ಟಿರುವುದನ್ನು ಕೂಡ ತಿನ್ನಬಹುದು.
ಆದ್ದರಿಂದ ನೀವು ಅರಿಶಿಣ ತಿಂದರೆ ಹೊಟ್ಟೆಯ ಆರೋಗ್ಯ ತಂದಿರುತ್ತದೆ.
ಲಿವರ್ನ ಆರೋಗ್ಯಕ್ಕೆ ತುಂಬಾನೇ
ಒಳ್ಳೆಯದು:
ನೀರಿಗೆ ಅರಿಶಿಣ ಹಾಕಿ ಕುಡಿಯುವುದರಿಂದ ಲಿವರ್ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅರಿಶಿಣ ಗಾಲ್ಬ್ಲೇಡರ್ನಲ್ಲಿ
ಪಿತ್ತರಸ ಉತ್ಪತ್ತಿಗೆ ಸಹಕಾರಿ ಹಾಗೂ ದಿನವಿಡೀ ಜೀರ್ಣಕ್ರಿಯೆ ಉತ್ತಮವಾಗಿ ನಡೆಯಲು ಸಹಕಾರಿ. ಲಿವರ್
ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುತ್ತದೆ, ಆದ್ದರಿಂದ ಲಿವರ್ನ ಆರೋಗ್ಯದ
ಕಡೆಗೆ ಗಮನಹರಿಸಬೇಕು, ಅರಿಶಿಣ ಲಿವರ್ನ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ.
ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ:
ಉರಿಯೂತದ ಸಮಸ್ಯೆಯಿದ್ದರೆ ಕ್ಯಾನ್ಸರ್, ಸಂಧಿವಾತದ ಸಮಸ್ಯೆ ಉಂಟಾಗುವುದು . ಈ ಬಗೆಯ ಸಮಸ್ಯೆ ತಡೆಗಟ್ಟಲು
ಅರಿಶಿಣದಲ್ಲಿರುವ ಕರ್ಕ್ಯೂಮಿನ್ ಸಹಾಯ ಮಾಡುತ್ತದೆ. ದಿನಾ ನೀರಿಗೆ ಅರಿಶಿಣ ಹಾಕಿ ಕುಡಿಯುವುದರಿಂದ
ಉರಿಯೂತದ ಸಮಸ್ಯೆ ತಡೆಗಟ್ಟಲು ಸಹಕಾರಿ. ಸಂಧಿವಾತದ ಸಮಸ್ಯೆ ಇರುವವರು ಅರಿಶಿಣ ನೀರು ಕುಡಿಯಬೇಕು,
ಬರೀ ಈ ಅರಿಶಿಣ ನೀರು ಕುಡಿದರೆ ಸಾಲದು ಔಷಧ ಕೂಡ ತೆಗೆದುಕೊಳ್ಳಬೇಕು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:
ಅರಿಶಿಣ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅರಿಶಿಣ ಸೋಂಕು, ಬ್ಯಾಕ್ಟಿರಿಯಾ ತಡೆಗಟ್ಟುತ್ತದೆ,
ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದ. ಅರಿಶಿಣದಲ್ಲಿ ಈ ಗುಣಗಳು ಇರುವುದರಿಂದಲೇ ಗಾಯವಾದಾಗ
ಅರಿಶಿಣ ಹಾಕಲಾಗುವುದು.
ತೂಕವನ್ನು ನಿಯಂತ್ರಿಸುತ್ತದೆ
:
ಅರಿಶಿಣ ತೂಕ ನಿಯಂತ್ರಣದಲ್ಲಿಡಲು ಕೂಡ ಸಹಕಾರಿ. ಇದು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ನಿಯಮಿತ
ವ್ಯಾಯಾಮ ಮಾಡುವ ಮುನ್ನ ನೀರಿಗೆ ಅರ್ಧ ಚಮಚ ಅರಿಶಿಣ ಹಾಕಿ ಮಿಕ್ಸ್ ಮಾಡಿ ಕುಡಿಯುರಿ. ಇದರಿಂದ ಮೈ
ತೂಕ ನಿಯಂತ್ರಣದಲ್ಲಿಡಲು ಸಹಕಾರಿ. ನೀವು ಬಿಸಿನೀರಿಗೆ ಸ್ವಲ್ಪ ನಿಂಬೆರಸ ಹಾಗೂ ಅರಿಶಿಣ ಹಾಕಿ ಕುಡಿದರೆ
ಒಳ್ಳೆಯದು.
ತ್ವಚೆಗೂ ತುಂಬಾ ಒಳ್ಳೆಯದು:
ನೀರಿಗೆ ಅರಿಶಿಣ ಹಾಕಿ ಕುಡಿಯವುದರಿಂದ ತ್ವಚೆಗೆ ತುಂಬಾ ಒಳ್ಳೆಯದು. ಅಲ್ಲದೆ ಮೊಡವೆ, ಮುಖದಲ್ಲಿ ಕಜ್ಜಿ
ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ. ಅಲ್ಲದೆ ಮುಖದಲ್ಲಿ ಹೊಳಪು ಕೂಡ ಹೆಚ್ಚಾಗುವುದು. ನಟಿ ವಿದ್ಯಾಬಾಲನ್
ಅವರು ಸೌಂದರ್ಯಕ್ಕಾಗಿ ದಿನಾ ಒಂದು ತುಂಡು ಅರಿಶಿಣ ತಿನ್ನುತ್ತೇನೆ ಎಂದು ಹೇಳಿದ್ದಾರೆ. ಅರಿಶಿಣ ತ್ವಚೆಯನ್ನು
ಆಂತರಿಕವಾಗಿ ಕೂಡ ಪೋಷಣೆ ಮಾಡುತ್ತದೆ.
ಮಂಡಿ ನೋವು ಕಡಿಮೆಯಾಗುವುದು:
ನೀರಿಗೆ ಅರಿಶಿಣ ಹಾಕಿ ಕುಡಿಯುವುದರಿಂದ ಮಂಡಿ ನೋವು ಕಡಿಮೆಯಾಗುವುದು. ಇಷ್ಟೆಲ್ಲಾ ಗುಣಗಳು ಅರಿಶಿಣದಲ್ಲಿದೆ. ಅರಿಶಿಣ ಖರೀದಿಸುವಾಗ ಅದಕ್ಕೆ
ಕೃತಕ ಬಣ್ಣ ಮಿಶ್ರವಾಗಿಲ್ಲ ಎಂದು ಖಾತರಿಪಡಿಸಿಕೊಳ್ಳಿ, ಅರಿಶಿಣ ಹೆಚ್ಚಾಗಿ ಸೇವಿಸಬೇಕಾಗಿಲ್ಲ, ನೀವು
ಸ್ವಲ್ಪ ಅರಿಶಿಣ ಹಾಕಿ ಸೇವಿಸಬಹುದು. ಮಕ್ಕಳು ನೀರಿನಲ್ಲಿ ಹಾಕಿಕೊಟ್ಟರೆ ಕುಡಿಯಲ್ಲ, ಹಾಗಾಗಿ ಹಾಲಿಗೆ
ಸ್ವಲ್ಪ ಅರಿಶಿಣ ಹಾಕಿ ಕೊಡಿ, ತುಂಬಾನೇ ಒಳ್ಳೆಯದು.